ಚುಕ್ಕೆ ಬೇನೆ-
 	ಟ್ರಪೋನೀಮ ಕೆರೇಟಿಯಮ್ ಹೆಸರಿನ ಜೀವಾಣುವಿನಿಂದ ಹರಡುವ ರೋಗ (ಪಿಂಟ). ರಕ್ತಹೀರುವ ನೊಣ, ಇಲ್ಲವೇ ಕೀಟಗಳು ರೋಗವನ್ನು ಹರಡುತ್ತವೆ. ರೋಗ ತೀರ ಬಲಿತಾಗ ಗುಂಡಿಗೆ ರಕ್ತನಾಳಗಳಿಗೂ ಹತ್ತಬಹುದು. 60% ರೋಗಿಗಳಲ್ಲಿ ಉಪದಂಶ (ಸಿಫಿಲಿಸ್) ರೋಗಿಗಳಲ್ಲಿದ್ದಂತೆ ವಾಸರ್ಮನ್ ಪ್ರತಿಕ್ರಿಯೆ ಧನಾತ್ಮಕ ಆಗಿರುವುದು. ಇದು ಯಾಸ್ ಬೇನೆಯನ್ನು ಹೋಲುತ್ತದೆ. ಹಸುಗೂಸುಗಳಲ್ಲಿ ಅಪರೂಪ. ವಯಸ್ಕ ಕರಿಯ ಜನರಲ್ಲಿ ಹೆಚ್ಚು. ಮೈಯಲ್ಲಿ ಅಲ್ಲಲ್ಲಿ ಬಣ್ಣ ಕಳೆದು ಚರ್ಮಗಂಟು ಕಟ್ಟುತ್ತದೆ. 6-12 ತಿಂಗಳಲ್ಲಿ ಕಾಣಿಸಿಕೊಳ್ಳುವ ಚಪ್ಪಟೆಯಾದ ಕೆಂಪು ಚುಕ್ಕೆಗಳಂಥ ದದ್ದುಗಳು ಏಳುತ್ತವೆ. ಇವು ಒಟ್ಟುಗೂಡಿ ಬಗೆ ಬಗೆ ಆಕಾರ ಹೊಂದಿ ಬೇರೆ ಚರ್ಮರೋಗಗಳನ್ನು ಹೋಲುತ್ತವೆ. ಈ ರೋಗ ಪೆನಿಸಿಲಿನ್ ಮದ್ದಿನಿಂದ ಪೂರ್ತಿ ಗುಣವಾಗುತ್ತದೆ. 
(ನೋಡಿ- ಯಾಸ್)
(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ